ತರ್ಲೆ ಜೋಕ್ಸ್ !!!!! ಮೇಷ್ಟ್ರು: ಕೋಳಿ ಮೊಟ್ಟೆ ಕೊಡುತ್ತೆ. ಹಸು ಹಾಲು ಕೊಡುತ್ತೆ. ಹಾಲು ಮತ್ತು ಮೊಟ್ಟೆ ಎರಡನ್ನೂ ಕೊಡೋ ಪ್ರಾಣಿ ಯಾವುದು? ಸ್ಟೂಡೆಂಟು: ಕಾರ್ನರ್ ಅಂಗಡಿ ಕಾಕ ಸಾರ್. ಅವ್ನ ಹತ್ರ ಎಲ್ಲ ಸಿಗತ್ತೆ! = ಹೆಂಡ್ತಿ: ಏನ್ ಮಾಡ್ತಾ ಇದ್ದೀರಾ? ಗಂಡ: ಸೊಳ್ಳೆ ಹೊಡೀತಾ ಇದ್ದೀನಿ. ಹೆಂಡ್ತಿ: ಎಷ್ಟು ಸೊಳ್ಳೆ ಹೊಡೆದ್ರಿ? ಗಂಡ: ಎರಡು ಹೆಣ್ಣು ಮೂರು ಗಂಡು. ಒಟ್ಟು ಐದು ಸೊಳ್ಳೆ ಹೊಡೆದೆ. ಹೆಂಡ್ತಿ: ಈ ಗಂಡು ಹೆಣ್ಣು ಎಲ್ಲ ಹೇಗೆ ಗೊತ್ತಾಯ್ತು ನಿಮಗೆ? ಗಂಡ: ಎರಡು ಕನ್ನಡಿ ಮೇಲೆ ಕೂತಿದ್ವು. ಮೂರು ಬಿಯರ್ ಬಾಟಲಿ ಮೇಲೆ ಕೂತಿದ್ವು! ಹೆಂಡ್ತಿ: ನೀವು ಸೊಳ್ಳೆ ಹೊಡೆಯೋಕೆ ಚಪ್ಪಾಳೆ ತಟ್ಟುತ್ತಾ ಇದ್ದದ್ದು ನೋಡಿ ಅವು ನಿಮ್ಮನ್ನು ಏನಂದುಕೊಂಡವೋ! = ಟೀಚರ್: ಮಕ್ಕಳೇ ದಿನಾ ಒಂದು ಲೋಟ ಹಸುವಿನ ಹಾಲು ಕುಡಿಯಿರಿ. ನಿಮ್ಮ ಬುದ್ಧಿ ಶಕ್ತಿ ಹೆಚ್ಚುತ್ತದೆ. ತರ್ಲೆ ಸ್ಟೂಡೆಂಟು: ಸುಮ್ನಿರಿ ಮಿಸ್. ನಿಮ್ಮ ಮಾತು ನಿಜ ಆಗಿದ್ರೆ ಇಷ್ಟೊತ್ತಿಗೆ ಕರುಗಳೆಲ್ಲ ವಿಜ್ಞಾನಿಗಳಾಗಿರ್ತಿದ್ವು! = ಓದಿ ಯಾವೋನ್ ಉದ್ಧಾರ ಆಗಿದಾನೆ ಅಂತ ಮಕ್ಳೆಲ್ಲ ಸ್ಕೂಲ್ ಬಿಡ್ತಾ ಇದಾರಂತೆ. ಕಾರಣ? ಸ್ಮೃತಿ ಇರಾನಿ- 12ನೇ ಕ್ಲಾಸ್ ಪಾಸ್. ಮಾನವ ಸಂಪನ್ಮೂಲ ಮಂತ್ರಿ ಉಮಾ ಭಾರತಿ- 6ನೇ ಕ್ಲಾಸ್ ಪಾಸ್. ಜಲ ಸಂಪನ್ಮೂಲ ಮಂತ್ರಿ ಆನಂದ್ ಗೀತೆ- ಎಸ್ಸೆಸೆಲ್ಸಿ ಪಾಸ್. ಮನೇಕಾ ಗಾಂಧಿ- ಪಿಯುಸಿ ಪಾಸ್ ಅಶೋಕ್ ಗಣಪತಿ- ಫಸ್ಟ್ ಪಿಯು ಅದೆಲ್ಲ ಬಿಡಿ ಮಾರಾಯ್ರೇ......